ಅಗ್ನಿಪಥ್ ಯೋಜನೆ ವಿರುದ್ಧ ಕಾಂಗ್ರೆಸ್ ನಾಯಕರ ವಾಕ್ಪ್ರಹಾರ ಮುಂದುವರೆದಿದೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಮಾಜಿ ಕೇಂದ್ರ ಸಚಿವರೂ ಆಗಿರೋ ವೀರಪ್ಪ ಮೊಯ್ಲಿ, ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಸೇನೆಗೆ ಸೇರಿಸುವ ಹುನ್ನಾರ ನಡೀತಿದೆ. ಸರ್ವಾಧಿಕಾರದ ಪಟ್ಟಕ್ಕೇರಲು ಮೋದಿ ಮಾಡಿರುವ ಸಂಚು ಅಂತ ದೂರಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಕೂಡ, ಪಿಎಸ್‍ಐ ನೇಮಕಾತಿ ವೇಳೆಯೂ ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಸೇರಿಸಲು ಯತ್ನಿಸಲಾಗಿತ್ತು. 540 ಮಂದಿಯಲ್ಲಿ ಅರ್ಧಕ್ಕಿಂತ ಹೆಚ್ಚು ಆರ್‍ಎಸ್‍ಎಸ್, ಬಿಜೆಪಿ ಬೆಂಬಲಿಗರನ್ನು ಸೇರಿಸಲು ಯತ್ನಿಸಲಾಗಿತ್ತು.. ಇದೀಗ ಸೇನೆಯಲ್ಲೂ ವಾಮಮಾರ್ಗ ಅನುಸರಿಸಲಾಗ್ತಿದೆ. ಇದು ಬಿಜೆಪಿಯ ಕುತಂತ್ರ ಅಂತ ದೂರಿದ್ದಾರೆ.
#publictv #newscafe #hrranganath